ಪರಿಚಯ:
ಸ್ಥಳೀಯ ಜನಪ್ರತಿನಿಧಿಗಳು, ಕಾಲೇಜು ಸ್ಥಾಪನಾ ಸಮಿತಿ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ವಿದ್ಯಾಭಿಮಾನಿಗಳ ಅವಿರತ ಶ್ರಮದಿಂದ ದಿನಾಂಕ: 23.07.2007 ರಲ್ಲಿ ಆರಂಭಗೊಂಡ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟ – ಪಡುಕೆರೆ ನಂತರದಲ್ಲಿ ಕಾಲೇಜು ಕಟ್ಟಡಕ್ಕೆ ಅವಶ್ಯವಿದ್ದ ನಿವೇಶನವನ್ನು ನಾಡೋಜ ಡಾ. ಜಿ. ಶಂಕರ್ ರವರು (3.48 ಎಕರೆ) ದೇಣಿಗೆಯಾಗಿ ನೀಡಿದ್ದರಿಂದ ಅವರ ತಂದೆ ತಾಯಿ ನೆನಪಿನಲ್ಲಿ ಕಾಲೇಜು ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಎಂದು ಮರುನಾಮಕರಣಗೊಂಡಿತು. 2007-08 ರ ಶೈಕ್ಷಣಿಕ ಸಾಲಿನಲ್ಲಿ ಬಿ.ಎ. ಮತ್ತು ಬಿ.ಬಿ.ಎಂ. ಕೋರ್ಸ್ ಗಳೊಂದಿಗೆ ಒಟ್ಟು 70 ವಿದ್ಯಾರ್ಥಿಗಳಿಂದ ಪ್ರಾರಂಭಿಸಲ್ಪಟ್ಟ ಸಂಸ್ಥೆಯಲ್ಲಿ 2018-19 ನೇ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬಿ.ಎ., ಬಿ.ಕಾಂ ಮತ್ತು ಬಿ.ಎಸ್.ಡಬ್ಲ್ಯೂ ಕೋರ್ಸ್ ಗಳಲ್ಲಿ ಒಟ್ಟು 549 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಯು.ಜಿ.ಸಿ ಯಿಂದ 12ಬಿ 2ಎಫ್ ಮಾನ್ಯತೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಶಾಶ್ವತ ಸಂಯೋಜನೆಗೆ ಒಳಪಟ್ಟಿರುವ ಸಂಸ್ಥೆ, 2016-17 ನೇ ಶೈಕ್ಷಣಿಕ ಸಾಲಿನಲ್ಲಿ ನ್ಯಾಕ್ (NAAC)ನ ಪ್ರಥಮ ಆವೃತ್ತಿಯ ಮೌಲ್ಯಮಾಪನದಲ್ಲಿ ‘ಬಿ’ ಮಾನ್ಯತೆ ಪಡೆದಿರುತ್ತದೆ.
ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕೋಟದಿಂದ 2 ಕಿ.ಮೀ ಸಮುದ್ರ ತೀರದ ಪಡುಕೆರೆಯಲ್ಲಿ ನೆಲೆಗೊಂಡು ದಶಮಾನೋತ್ಸವ ಪೂರೈಸಿ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಅನುಭವಿ ಮತ್ತು ಪ್ರತಿಭಾನ್ವಿತ ಬೋಧಕ – ಬೋಧಕೇತರ ವೃಂದದವರನ್ನು ಹೊಂದಿರುವ ಕಾಲೇಜು, ಗ್ರಾಮೀಣ ಬಡ ಹಾಗೂ ಆಥರ್ಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಮತ್ತು ಬಹುತೇಕ ವಿದ್ಯಾರ್ಥಿನಿಯರೇ ಉನ್ನತ ಶಿಕ್ಷಣದ ಕನಸನ್ನು ಸಾಕ್ಷಾತ್ಕಾರಗೊಳಿಸುವ ವಿದ್ಯಾಸಂಸ್ಥೆಯಾಗಿ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಎನ್.ಎಸ್.ಎಸ್. ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ವಿಶ್ವವಿದ್ಯಾನಿಲಯ ಮಟ್ಟದ ಚಟುವಟಿಕೆಗಳಾದ ಪುರುಷರ ಬಾಲ್ಬ್ಯಾಡ್ಮಿಂಟನ್ ಮತ್ತು ಕ್ರಿಕೆಟ್ ಪಂದ್ಯಾಕೂಟಗಳು, ನಾಯಕತ್ವ ತರಬೇತಿ ಶಿಬಿರ, ಸಾಂಸ್ಕೃತಿಕ ಸ್ಪರ್ಧೆ ಆರೋಹ, ಮಹಿಳಾ ಸಬಲೀಕರಣದ ಆಶಯದ ‘ಸ್ಪಂದನ’ ರೋವರ್-ರೇಂಜರ್ ಶಿಬಿರ, ಮಂಗಳೂರು ವಿ.ವಿ.ಯ ರಂಗೋತ್ಸವ, ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಜಿಸಿ – ಎನ್.ಇ.ಟಿ. – ಕೆ.ಸೆಟ್ ತರಬೇತಿ, ಲಿಂಗಸೂಕ್ಷ್ಮತಾ ಕಾರ್ಯಾಗಾರ ಜೊತೆಗೆ ಮಾನವ ಹಕ್ಕುಗಳ ಕುರಿತಾದ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜನೆ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ಧ್ಯೇಯೋದ್ಧೇಶಗಳು:
ಅವಕಾಶ ವಂಚಿತ ಗ್ರಾಮೀಣ ಮತ್ತು ಹಿಂದುಳಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಶಿಕ್ಷಣದ ಮೂಲಕ ಮಾದರಿ ಪ್ರಜೆಗಳನ್ನಾಗಿ ರೂಪಿಸುವುದು.
ಮಾನವೀಯ ಮತ್ತು ನೈತಿಕ ಮೌಲ್ಯಗಳ ಮೂಲಕ ಪರಿಸರ ಜಾಗೃತಿ ಮತ್ತು ಸಾಮಾಜಿಕ ಕಳಕಳಿಯುಳ್ಳ ಜವಾಬ್ದಾರಿಯುತ ನಾಗರಿಕರನ್ನಾಗಿ ಬೆಳೆಸುವುದು.
ಶೈಕ್ಷಣಿಕ ಮತ್ತು ವೃತ್ತಿ ಕೌಶಲಗಳ ತರಬೇತಿಯೊಂದಿಗೆ ವಿಮರ್ಶಾತ್ಮಕ, ಬೌದ್ಧಿಕ ಮತ್ತು ಔದ್ಯೋಗಿಕ ಸಾಮಥ್ರ್ಯವನ್ನು ಹೆಚ್ಚಿಸಿ ಉನ್ನತಿಯನ್ನು ಸಾಧಿಸುವುದು.
ಜೀವನ ಕೌಶಲಗಳನ್ನು ಕಲಿಸುವುದರ ಮೂಲಕ ಬದುಕಿನ ಸವಾಲುಗಳನ್ನೆದುರಿಸುವ ವಿಶ್ವಾಸ ಮತ್ತು ಛಲ ಮೂಡಿಸುವುದು.
ವಿದ್ಯಾರ್ಥಿಗಳಲ್ಲಿ ಕರ್ತವ್ಯಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಾ ರಾಷ್ಟ್ರೀಯ ಭಾವನೆ ಮತ್ತು ಐಕ್ಯತೆಯನ್ನು ಬೆಳೆಸುವ ಶಿಕ್ಷಣ ನೀಡುವುದು.
ಶೈಕ್ಷಣಿಕ ಉನ್ನತಿಯನ್ನು ಸಾಧಿಸುವಲ್ಲಿ ಅಗತ್ಯವಾದ ಸಂಶೋಧನಾ ಮನೋಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಮತ್ತು ಶಿಕ್ಷಕ ವೃಂದದವರಲ್ಲಿ ಬೆಳೆಸುವುದು.
ಪರಿಸರದ ಸಂಘ ಸಂಸ್ಥೆಗಳು, ಹಳೆವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕ – ಪೋಷಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ – ಅಧಿಕಾರಿ ವೃಂದದವರು ಹಾಗೂ
ಜನಪ್ರತಿನಿಧಿಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿ ವಿದ್ಯಾಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ಸಾಧಿಸುವುದು.
ಎನ್.ಎಸ್.ಎಸ್., ರೋವರ್ಸ್ – ರೇಂಜರ್ಸ್, ರೆಡ್ ಕ್ರಾಸ್, ಇತ್ಯಾದಿ ಸ್ವಯಂ ಸೇವಾ ಸಂಘಗಳು ಹಾಗೂ ಲಲಿತಕಲೆ, ಕ್ರೀಡೆ ಮತ್ತು ಕೌಶಲಾಭಿವೃದ್ಧಿ ತರಬೇತಿಗಳ ಮೂಲಕ
ವಿದ್ಯಾರ್ಥಿಗಳ ಸಾಮಥ್ರ್ಯವನ್ನು ಹೆಚ್ಚಿಸುವುದು.
ಶೈಕ್ಷಣಿಕವಾಗಿ ವಿಶಿಷ್ಟ ಶ್ರೇಣಿಯೊಂದಿಗೆ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಕಾಲರ್ ಶಿಪ್ ಸೌಲಭ್ಯವನ್ನು ದೊರಕಿಸಿಕೊಡುವುದು.
(ಈಗಾಗಲೇ ನಮ್ಮ ವಿದ್ಯಾರ್ಥಿಗಳು ಗೀತಾನಂದ ಫೌಂಡೇಶನ್ ಮಣೂರು ಇವರು ನೀಡುವ ಪ್ರವೇಶಾತಿ ಶುಲ್ಕ & ಮೆರಿಟ್ ಸ್ಕಾಲರ್ ಶಿಪ್, ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಧನಸಹಾಯಕ, ಹಿಂದುಳಿದ ವರ್ಗಗಳ ಇಲಾಖೆಯ ಪೋಸ್ಟ್ ಮೆಟ್ರಿಕ್ ಸ್ಕಾಲರ್ ಶಿಪ್, ಸಂಚಿಹೊನ್ನಮ್ಮ, ಸಂತೂರ್, ಜಿಂದಾಲ್ ಸ್ಕಾಲರ್ ಶಿಪ್, MHRD, ವಿದ್ಯಾಸಿರಿ,
ವಿದ್ಯಾಪೋಷಕ, ಅನಂತಚೇತನ ಚಾರಿಟೇಬಲ್ ಟ್ರಸ್ಟ್ ಹಾಗೂ ಕಾರ್ಮಿಕ ಇಲಾಖಾ ಸ್ಕಾಲರ್ ಶಿಪ್ ಗಳನ್ನೂ ಪಡೆಯುತ್ತಿದ್ದಾರೆ.)
Lakshmi Soma Bangera Government First Grade College is established in 2007 by the Government of Karnataka with the noble intention of imparting higher education to the rural youth. Situated in the southernmost part of udupi district, Kota is set in as a typical rural background. Most of the students belong to either poor income group or middle class income group. The lower income along with no educational institution giving higher education has forced the rural young population to stop their dream of getting higher education.
PREFACE OF THE COLLEGE
India, a country of rich culture. A country with wide diversity. Rural areas are one of the distinctive features of our country which needs to be developed. One of the key factors of growth is the development of education. Education is for all. With this intension the initiatives are taken to establish a first grade college in Kota Padukare a village of Udupi District. The rural youth here if they want to study further they need to travel a lot since the institutions offering higher education are not nearby forcing them to travel a long distance. Further getting education in such institutions is also not easy for them This is mainly due to two reasons: they offer education at a fee which they can not afford and lack of travelling facilities. All these have contributed negatively on the continuation of their education. Hence they were forced to discontinue their education. This made the people worried. Therefore certain initiatives were taken to approach the state administration and the result was establishment of Government First Grade College here.
FIND US
The college is suitably located near the beach of Arabian Sea. It is 2 k.m to the left of N.H.66 on the way to Kundapura form the Temple City Udupi. The College is in Kota-Padukare. Kota is the birth Place of Jnana Peeta Awardee Dr. Kota Shivaramam Karanth, The railway station is at Barkuru which is 14 k.m. away form the college. The nearest airport is at Bajpe. The college is on the total land area of 3.48 acres.
THE JOURNEY
College was started in the year 2007. The mission of the government to impart education to the rural population was the guiding inspiration behind it to set up this college. Originally when the college was started the college was named as Government First Grade College. But later in the year 2011 the college was renamed after the name Late Smt. Lakshmi Soma Bangera, the Mother of Dr. G. Shankar. Therefore now the name of our college is Lakshmi Soma Bangera Government First Grade College. The college initially started functioning with the total strength of 70 students. At that time only two courses wre being offered. They were B.A. and B.B.M Later in the very next year itself the B.Com and BSW Degree were also started. Every year there was a remarkable increase in the number of admission. This increase is because of many reasons such as the results, the curriculum design of university, the demand for higher education, the support of government etc. Over the years the result of students in the examination has also improved.
PERFORMANCES TO REMEMBER
MISION
TO SEE THAT THE RURAL YOUTH DEPRIVED OF EDUCATION GETS EDUCATION AND BECOMES A ROLE MODEL IN THE SOCIETY .
Vision
“TO ENABLE ALL STUDENTS TO BECOME GOOD HUMAN BEINGS, PRODUCTIVE AND SOCIALLY RESPONSIBLE CITIZENS BY ACQUIRING THE PRESCRIBED COMPETENCIES AND VALUES SO AS TO ACHIEVE EXCELLENCE”
GOALS